Saturday, 11 December 2021

naanu ...Kastur (Life story of Kasturi Bai Gandhi) by Dr. H.S. Anupama.

 ನಾನು ........ ಕಸ್ತೂರ್ , ಕಸ್ತೂರಬಾ ಜೀವನ ಕಥನ , ಕಸ್ತೂರಿಬಾಯಿ ಗಾಂಧೀ ರವರ ಚರಿತ್ರೆಯನ್ನುಅವರೇ ಹೇಳಿದಂತೆ Dr. .H.S.  ಅನುಪಮಾರವರು ಬರೆದಿರುವ ಸುಂದರ ಕಥನ.  ಅನುಪಮಾರವರು ಸಂಶೋಧಿಸಿ ರಚಿಸಿರುವ ಗ್ರಂಥ . ಅವರು ವೈದ್ಯಕೀಯ ವೃತ್ತಿಯಲ್ಲಿದ್ದರೂ  ಸಾಹಿತ್ಯ ರಚನೆಯಲ್ಲಿ ಆಸಕ್ತರು . ಕವಿತೆ, ಕಥೆಗಳು, ಪ್ರವಾಸ ಕಥನ , ವೈದ್ಯರಾಗಿ ಅವರ ಅನುಭವಗಳು ,  ಹೀಗೆ ಅನೇಕ ಗ್ರಂಥಗಳನ್ನು ಅವರು ಬರೆದಿದ್ದಾರೆ.  

ಕಸ್ತೂರಬಾ ರವರು ಮಹಾತ್ಮ ಗಾಂಧೀಜಿಯವರ ಪತ್ನಿಯಾಗಿ ಅನುಭವಿಸಿದ ಕಷ್ಟ , ಸುಖ ಗಳನ್ನು ಚೆನ್ನಾಗಿ ಚಿತ್ರಿಸಿದ್ದಾರೆ .  ಜೊತೆಗೆ, ಪತಿಯ ದೌರ್ಬಲ್ಯಗಳು, ಪ್ರಪಂಚದ ದೃಷ್ಟಿಯಿಂದ ಅವರಿಗೆ ಸಿಕ್ಕಿದ ಪ್ರೀತಿ, ಗೌರವ  ಯಾವುದೇ ಪತ್ನಿಗೆ ಹೆಮ್ಮೆಯ ವಿಷಯವೇ. ಆದರೆ ಮಹಾತ್ಮರ ಪತ್ನಿಯಾಗಿ ಕಸ್ತೂರ ಬಾ ರವರ  ನೋವು, ನಲಿವುಗಳನ್ನು ಅವರ ಬಾಯಿಯಿಂದಲೇ ಹೇಳಿಸುವ ಕೌಶಲ್ಯವನ್ನು ಶ್ರೀಮತಿ ಅನುಪಮಾ  ರವರು ಸಮರ್ಪಕವಾಗಿ ನೆರವೇರಿಸಿದ್ದಾರೆ 

No comments:

Post a Comment