Saturday, 11 December 2021

naanu ...Kastur (Life story of Kasturi Bai Gandhi) by Dr. H.S. Anupama.

 ನಾನು ........ ಕಸ್ತೂರ್ , ಕಸ್ತೂರಬಾ ಜೀವನ ಕಥನ , ಕಸ್ತೂರಿಬಾಯಿ ಗಾಂಧೀ ರವರ ಚರಿತ್ರೆಯನ್ನುಅವರೇ ಹೇಳಿದಂತೆ Dr. .H.S.  ಅನುಪಮಾರವರು ಬರೆದಿರುವ ಸುಂದರ ಕಥನ.  ಅನುಪಮಾರವರು ಸಂಶೋಧಿಸಿ ರಚಿಸಿರುವ ಗ್ರಂಥ . ಅವರು ವೈದ್ಯಕೀಯ ವೃತ್ತಿಯಲ್ಲಿದ್ದರೂ  ಸಾಹಿತ್ಯ ರಚನೆಯಲ್ಲಿ ಆಸಕ್ತರು . ಕವಿತೆ, ಕಥೆಗಳು, ಪ್ರವಾಸ ಕಥನ , ವೈದ್ಯರಾಗಿ ಅವರ ಅನುಭವಗಳು ,  ಹೀಗೆ ಅನೇಕ ಗ್ರಂಥಗಳನ್ನು ಅವರು ಬರೆದಿದ್ದಾರೆ.  

ಕಸ್ತೂರಬಾ ರವರು ಮಹಾತ್ಮ ಗಾಂಧೀಜಿಯವರ ಪತ್ನಿಯಾಗಿ ಅನುಭವಿಸಿದ ಕಷ್ಟ , ಸುಖ ಗಳನ್ನು ಚೆನ್ನಾಗಿ ಚಿತ್ರಿಸಿದ್ದಾರೆ .  ಜೊತೆಗೆ, ಪತಿಯ ದೌರ್ಬಲ್ಯಗಳು, ಪ್ರಪಂಚದ ದೃಷ್ಟಿಯಿಂದ ಅವರಿಗೆ ಸಿಕ್ಕಿದ ಪ್ರೀತಿ, ಗೌರವ  ಯಾವುದೇ ಪತ್ನಿಗೆ ಹೆಮ್ಮೆಯ ವಿಷಯವೇ. ಆದರೆ ಮಹಾತ್ಮರ ಪತ್ನಿಯಾಗಿ ಕಸ್ತೂರ ಬಾ ರವರ  ನೋವು, ನಲಿವುಗಳನ್ನು ಅವರ ಬಾಯಿಯಿಂದಲೇ ಹೇಳಿಸುವ ಕೌಶಲ್ಯವನ್ನು ಶ್ರೀಮತಿ ಅನುಪಮಾ  ರವರು ಸಮರ್ಪಕವಾಗಿ ನೆರವೇರಿಸಿದ್ದಾರೆ 

Wednesday, 31 October 2018

Marriage & the World Around by Smt. S.Susheela Chinthamani

ನಮ್ಮ ಚಿರಪರಿಚಿತರಾದ ಶ್ರೀಮತಿ ಸುಶೀಲ (ಬೆಂಗಳೂರಿನ ಸುಪ್ರಸಿದ್ಧ ಅಡ್ವೋಕೇಟ್ ರವರು) ಬರೆದ  ಪುಸ್ತಕ Marriage & the World arround (2010. Ameya publications, Bangalore-9) ಬಹಳ ಉಪಯುಕ್ತವಾದ ಪುಸ್ತಕ. 
ವಿವಾಹ ವಿಚ್ಛೇದನ ಗಳು ಹೆಚ್ಚಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಇಂತಹ ಪುಸ್ತಕವು ಅವಶ್ಯಕವಾಗಿದೆ. ದಾಂಪತ್ಯ   ಜೀವನದ ಅನೇಕ ಸಮಸ್ಯೆ ಗಳನ್ನು ಚರ್ಚಿಸಿ ಅವುಗಳನ್ನು ನಿಭಾಯಿಸಿ ಸುಖೀ ಜೀವನ ನಡೆಸಲು ಸೂತ್ರಗಳನ್ನು ಕೊಟ್ಟಿದ್ದಾರೆ.

Friday, 25 June 2010

ನರಸಿಂಹ ಶತಕ






ಶ್ರೀ ಲಕ್ಷ್ಮೀ ನರಸಿಂಹ ಶಾಸ್ತ್ರಿಗಳು ಅನುವಾದಿಸಿದ ನೃಸಿಂಹ ಶತಕ