ನಾನು ........ ಕಸ್ತೂರ್ , ಕಸ್ತೂರಬಾ ಜೀವನ ಕಥನ , ಕಸ್ತೂರಿಬಾಯಿ ಗಾಂಧೀ ರವರ ಚರಿತ್ರೆಯನ್ನುಅವರೇ ಹೇಳಿದಂತೆ Dr. .H.S. ಅನುಪಮಾರವರು ಬರೆದಿರುವ ಸುಂದರ ಕಥನ. ಅನುಪಮಾರವರು ಸಂಶೋಧಿಸಿ ರಚಿಸಿರುವ ಗ್ರಂಥ . ಅವರು ವೈದ್ಯಕೀಯ ವೃತ್ತಿಯಲ್ಲಿದ್ದರೂ ಸಾಹಿತ್ಯ ರಚನೆಯಲ್ಲಿ ಆಸಕ್ತರು . ಕವಿತೆ, ಕಥೆಗಳು, ಪ್ರವಾಸ ಕಥನ , ವೈದ್ಯರಾಗಿ ಅವರ ಅನುಭವಗಳು , ಹೀಗೆ ಅನೇಕ ಗ್ರಂಥಗಳನ್ನು ಅವರು ಬರೆದಿದ್ದಾರೆ.
ಕಸ್ತೂರಬಾ ರವರು ಮಹಾತ್ಮ ಗಾಂಧೀಜಿಯವರ ಪತ್ನಿಯಾಗಿ ಅನುಭವಿಸಿದ ಕಷ್ಟ , ಸುಖ ಗಳನ್ನು ಚೆನ್ನಾಗಿ ಚಿತ್ರಿಸಿದ್ದಾರೆ . ಜೊತೆಗೆ, ಪತಿಯ ದೌರ್ಬಲ್ಯಗಳು, ಪ್ರಪಂಚದ ದೃಷ್ಟಿಯಿಂದ ಅವರಿಗೆ ಸಿಕ್ಕಿದ ಪ್ರೀತಿ, ಗೌರವ ಯಾವುದೇ ಪತ್ನಿಗೆ ಹೆಮ್ಮೆಯ ವಿಷಯವೇ. ಆದರೆ ಮಹಾತ್ಮರ ಪತ್ನಿಯಾಗಿ ಕಸ್ತೂರ ಬಾ ರವರ ನೋವು, ನಲಿವುಗಳನ್ನು ಅವರ ಬಾಯಿಯಿಂದಲೇ ಹೇಳಿಸುವ ಕೌಶಲ್ಯವನ್ನು ಶ್ರೀಮತಿ ಅನುಪಮಾ ರವರು ಸಮರ್ಪಕವಾಗಿ ನೆರವೇರಿಸಿದ್ದಾರೆ